ಮಾನವೀಯ ಸಂಬಂಧ ಬೆಸೆಯಲು ಸಂಗೀತ ಉತ್ತಮ ಮಾಧ್ಯಮ

ಮಾನವೀಯ ಸಂಬಂಧ ಬೆಸೆಯಲು ಸಂಗೀತ ಉತ್ತಮ ಮಾಧ್ಯಮ

ತುಮಕೂರು- ಮಾನವೀಯ ಮೌಲ್ಯಗಳು ಕುಸಿಯುತ್ತಿರುವ, ತಾಂತ್ರಿಕತೆ ಬೆಳೆಯುತ್ತಿರುವ ಸಂದರ್ಭದಲ್ಲೂ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಹಿರಿಮೆ ತುಮಕೂರು ಜಿಲ್ಲೆಯದ್ದಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಟಿ.ಆರ್. ಲೀಲಾವತಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೂಳೂರು ಹೋಬಳಿಯ ಬೊಮ್ಮನಹಳ್ಳಿ ಶ್ರೀ ಸಿದ್ದಗಿರಿ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಕೀರ್ತನ ರಂಗಬಳಗ ಸಂಸ್ಥೆಯು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮವನ್ನು ಹಾರ್ಮೋನಿಯಂ ನುಡಿಸುವ ಮುಖೇನ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಮೌಲ್ಯವಾದಂತಹ ಹರಿಕಥೆ, ಕಥಾಕೀರ್ತನೆಗಳು, ದಾಸ ಸಾಹಿತ್ಯ, ವಚನ ಸಾಹಿತ್ಯ, ಪೌರಾಣಿಕ ನಾಟಕಗಳಲ್ಲಿ ಬರುವ ರಂಗಗೀತೆಗಳು, ಜಾನಪದ ಭಾವನಾತ್ಮಕತೆಯನ್ನು ತುಂಬಿರುವಂತ ಭಾವಗೀತೆಗಳು ಇವೆಲ್ಲಕ್ಕೂ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಮೆರಗು ನೀಡಿದೆ ಎಂದರು.

ಮಾನವನ ಮನಸ್ಸನ್ನು ಶುದ್ಧಗೊಳಿಸುವಲ್ಲಿ ಹಾಗೂ ಮಾನವೀಯ ಸಂಬಂಧವನ್ನು ಬೆಸೆಯುವಲ್ಲಿ ಸಂಗೀತ ಒಂದು ಉತ್ತಮ ಮಾಧ್ಯಮವಾಗಿದೆ. ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯ ಉಳಿಯಬೇಕಾದರೆ ಯುವಶಕ್ತಿಯನ್ನು ಸಾಂಸ್ಕೃತಿಕ ನೆಲೆಗಟ್ಟಿಗೆ ಒಗ್ಗೂಡಿಸಬೇಕಾಗಿದೆ. ಇದು ನಮ್ಮ ನಿಮ್ಮೆಲ್ಲರ ಪ್ರಮುಖ ಕರ್ತವ್ಯವೂ ಆಗಿದೆ ಎಂದರು.

ತುಮಕೂರು ಹೆಚ್.ಎಂ.ಟಿ. ಗಡಿಯಾರ ಕಾರ್ಖಾನೆ ಇಂತಹ ಉತ್ತಮ ಶ್ರಮಜೀವಿಗಳ ಮನಸ್ಸನ್ನು ಪರಿವರ್ತಿಸುತ್ತಾ, ಅನೇಕ ಜನ ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆಕಥಾಕೀರ್ತನ ಕ್ಷೇತ್ರವನ್ನು ಪೆÇ್ರೀತ್ಸಾಹಿಸಿರುವುದು ಗಡಿಯಾರ ಕಾರ್ಖಾನೆ ನೀಡಿದಂತಹ ಒಬ್ಬ ಉತ್ತಮ ಕೀರ್ತನಕಾರನಿಗೂ ಬೆನ್ನು ತಟ್ಟಿರುವುದಕ್ಕೆ ಸಾಕ್ಷಿ. ಇದರಲ್ಲಿ ಕಥಾಕೀರ್ತನಕಾರರಾದ ನರಸಿಂಹದಾಸ್ ರವರೂ ಒಬ್ಬರಾಗಿರುವುದು ಸಂತೋಷದ ವಿಚಾರ ಎಂದರು.

ಹಿರೇಮಠದ ಅಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಮತ್ತು ಹಿರಿಯ ಪತ್ರಕರ್ತರಾದ ದಿ. ಜಿ. ಇಂದ್ರಕುಮಾರ್ ರವರ ಪೆÇ್ರೀತ್ಸಾಹದಿಂದ ಕೀರ್ತನ ರಂಗಬಳಗ ಸಂಸ್ಥೆ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.

ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬೆಳ್ಳಾವಿ ಶಿವಕುಮಾರ್ ಇಂತಹ ಪ್ರತಿಭಾನ್ವಿತ ಕಲಾವಿದರಿಗೆ ನಮ್ಮ ಪರಿಷತ್ ವೇದಿಕೆಗಳನ್ನ ಮತ್ತು ಅವಕಾಶಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದ್ದಾರೆ ಎಂದು ಹೇಳಿದರು.

ಶನೇಶ್ವರ ದೇವಸ್ಥಾನದ ಟ್ರಸ್ಟಿ ಜನಾರ್ಧನ್, ಬಸವ ಸಮಿತಿ ಅಧ್ಯಕ್ಷರಾದ ರಾಮಸ್ವಾಮಿ, ಶಿಕ್ಷಕಿ ಪ್ರೇಮ ರವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲ್ಲೂಕು ಅಶ್ವಥ್ನಾರಾಯಣ್, ಹನುಮಂತರಾಯಪ್ಪ ಹಾಗೂ ರಂಗನಾಥ್ ರಂಗಗೀತೆ, ಕಲಾಶ್ರೀ ನರಸಿಂಹದಾಸ್ ಹಾಗೂ ಮಾಗಡಿ ತಾಲ್ಲೂಕಿನ ಗಂಗಾನಯಕ್ ಕಥಾಕೀರ್ತನ ಮಾಲಿಕೆ, ಬೆಂಗಳೂರು ಕಾಂತರಾಜು ಮತ್ತು ಭಾಗ್ಯಲಕ್ಷ್ಮೀ ಭಕ್ತಿಗೀತೆ, ತುಮಕೂರು ಸಂಜನ್ ಮತ್ತು ಹೆಚ್.ಕೆ. ಲಾವಣ್ಯ, ಕು. ಚೈತ್ರ, ಕೊಟಗೆರೆ ತಾಲ್ಲೂಕು ಇವರುಗಳು ಜಾನಪದಗೀತೆ ಹಾಡುವುದರೊಂದಿಗೆ ಸಭಿಕರ ಮನಸ್ಸನ್ನು ಮನಸೂರೆಗೊಂಡರು.

ಸಹವಾದ್ಯಗಾರರಾಗಿ ಕೃಷ್ಣಮೂರ್ತಿ-ವಯೋಲಿನ್, ಕೆ.ಕಾಂತರಾಜು, ಬೆಂಗಳೂರು ಮತ್ತು ಹೆಬ್ಬೂರು ಕುಮಾರ್-ತಬಲ, ಅಶ್ವಥ್ನಾರಾಯಣ್-ಕೀಬೋರ್ಡ್ ಮತ್ತು ಹಾರ್ಮೋನಿಯಂನಲ್ಲಿ ಸಾಥ್ ನೀಡಿದರುಕಲಾಶ್ರೀ ನರಸಿಂಹದಾಸ್ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ಹೆಚ್.ಕೆ. ಕೆಂಪರಾಜು ಕಾರ್ಯಕ್ರಮ ನಿರೂಪಿಸಿದರು.